ಹಾಗಲಕಾಯಿ ಚಟ್ನಿಪುಡಿ

Cooking @pexels.com
Reading Time: 2 minutes

ಹಾಗಲಕಾಯಿ ಚಟ್ನಿಪುಡಿ

ಪ್ರಸ್ತುತ  ಜೀವನ ಶೈಲಿ, ಸಿದ್ಧಪಡಿಸಿದ ಆಹಾರಗಳ ಬಳಕೆ ಇತ್ಯಾದಿಗಳಿಂದ ರಕ್ತದ ಒತ್ತಡ, ಮಧುಮೇಹ ರೋಗಳಿಂದ ಬಳಲುವುದು ಸರ್ವೇ ಸಾಮಾನ್ಯವಾಗಿದೆ.ನಮ್ಮ ತಾಯಿ ಲಕ್ಷ್ಮಿಯವರಿಂದ ಕಲಿತ ಆರೋಗ್ಯಕ್ಕೆ ಉತ್ತಮವಾದ ಸರಳ, ಸ್ವಾದಿಷ್ಟ, ವಿಭಿನ್ನ ಹೊಸರುಚಿ ಹಾಗಲಕಾಯಿ ಚಟ್ನಿಪುಡಿ. ಇದು ಬಿಸಿಅನ್ನ,ಅಕ್ಕಿರೊಟ್ಟಿ, ದೋಸೆ, ಚಪಾತಿ ಇತ್ಯಾದಿಗಳೊಂದಿಗೆ ಸವಿಯಲು ಬಹಳ ರುಚಿಕರ.


ಬೇಕಾಗುವ ಸಾಮಾಗ್ರಿಗಳು:
೧. ಹಾಗಲಕಾಯಿ.         ಕಾಲು ಕೆ. ಜಿ ( 2 ಹಾಗಲಕಾಯಿ)
೨. ಕಡಲೆಬೇಳೆ.              75 ( ಗ್ರಾಂ)
೩. ಉದ್ದಿನಬೇಳೆ.            50 ಗ್ರಾಂ
೪. ಬ್ಯಾಡಗಿ      ಮೆಣಸಿನಕಾಯಿ.      20-25
೫. ಒಣಕೊಬ್ಬರಿ.             ಅರ್ಧ ಬಟ್ಟಲು
೬. ಇಂಗು.                     ಅರ್ಧ ಟೀ ಚಮಚ
೭. ಎಣ್ಣೆ.                       3 ದೊಡ್ಜ ಚಮಚ
೮. ಬೆಲ್ಲದ ಪುಡಿ.             3 ಟೀ ಚಮಚ
೯. ಉಪ್ಪು.                     ರುಚಿಗೆ ತಕ್ಕಷ್ಟು
೧೦. ಹುಣಸೆಹಣ್ಣು.        ಸಣ್ಣ ನಿಂಬೆಹಣ್ಣಿನ ಗಾತ್ರ
೧೧. ಅರಿಷಿಣ.              ಅರ್ಧ ಟೀ ಚಮಚ
೧೨. ಕರಿಬೇವು.             2 ಎಸಳು
೧೩. ಸಾಸಿವೆ,                ಒಗ್ಗರಣೆಗೆ ತಲಾ ಒಂದೊಂದು
         ಕಡಲೆಬೇಳೆ.          ಚಮಚ ಸಾಸಿವೆ, ಕಡಲೆಬೇಳೆ
       ಉದ್ದಿನಬೇಳೆ.         ಉದ್ದಿನಬೇಳೆ

Karela
 ಮಾಡುವ ವಿಧಾನ

ಮೊದಲಿಗೆ ಹಾಗಲಕಾಯಿಯನ್ನು ತುರಿದು ಅದಕ್ಕೆ ಅರಿಷಿಣ1 ಚಮಚ ಮತ್ತು ಅರ್ಧ ಚಮಚ ಉಪ್ಪು

ಸೇರಿಸಿ ಒತ್ತಿಡಿ. ಅರ್ಧ ಗಂಟೆ ನಂತರ ತುರಿಯನ್ನು ಹಿಂಡಿ

ಪ್ರತ್ಯೇಕವಾಗಿಡಿ.  ನಂತರ ಒಂದು ಬಾಣಲೆಯಲ್ಲಿ ಹುಣಸೆಹಣ್ಣು, ಕಡಲೆಬೇಳೆ, ಉದ್ದಿನಬೇಳೆ, ಮೆಣಸಿನಕಾಯಿ, ಇಂಗನ್ನು

ಅರ್ಧ ಚಮಚ ಎಣ್ಣೆ ಸೇರಿಸಿ ಹೊಂಬಣ್ಣ ಬರುವ ತನಕ

ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.  ತಣ್ಣಗಾದ ನಂತರ

ತುರಿದ ಒಣಕೊಬ್ಬರಿ, ಬೆಲ್ಲ, ಉಪ್ಪು ಸೇರಿಸಿ ತರಿತರಿಯಾಗಿ ಪುಡಿಮಾಡಿಕೊಳ್ಳಿ.

ತದನಂತರ ಒಂದು ಬಾಣಲೆಗೆ 3 ದೊಡ್ಡ ಚಮಚ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ

ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ.  ಹಿಂಡಿ ಇಟ್ಟುಕೊಂಡ ಹಾಗಲಕಾಯಿ ತುರಿ ಹಾಕಿ ಮಧ್ಯಮ ಉರಿಯಲ್ಲಿ ಹಸಿ ವಾಸನೆ ಹೋಗಿ ಸ್ವಲ್ಪ ಕಂದು ಬಣ್ಣ ಬರುವ ತನಕ ಸುಮಾರು 6 -8ನಿಮಿಷ ಹುರಿಯಬೇಕು.

ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಸಿದ್ಧಪಡಿಸಿದ ಪುಡಿ ಹಾಕಿ

ಒಲೆ ಆರಿಸಿಬಿಡಿ. ಚೆನ್ನಾಗಿ ಕೆದಕಿರಿ. ನಿಮ್ಮ ಆರೋಗ್ಯಕರ,

ಸ್ವಾದಿಷ್ಟ ಹಾಗಲಕಾಯಿ ಚಟ್ನಿಪುಡಿ ಸವಿಯಲು ಸಿದ್ಧ.

Leave a Reply