ರೂಪಾಂತರಿ ಕರೋನ

carona @pexels.com
Reading Time: < 1 minute

ರೂಪಾಂತರಿ ಕರೋನ

ಕರೋನ ಹೆಮ್ಮಾರಿ ಸಿಂಹಸ್ವಪ್ನ
ಅಲೆಗಳ ಸುಳಿಯಲಿ ತತ್ತರಿಸಿದೆ ಜನಜೀವನ
ಲಸಿಕೆ ಬಂದರೂ ಸಂವತ್ಸರ ಕಳೆದರೂ
ಮನೆಮನೆಯ ಕದವ ತಟ್ಟುತಿದೆ
ನಿರಾತಂಕ ಸಮಚಿತ್ತ ಸುಭಿಕ್ಷ ಬದುಕು- ಯಕ್ಷಪ್ರಶ್ನೆ

ಅನುರಣಿಸುತಿದೆ ರಣಹೆಮ್ಮಾರಿ
ಮರಣ ಮೃದಂಗನಿನಾದ 
ರೂಪಾಂತರಿ ಕರೋನ _ ಹೊಸ ಹೊಸ 
ಲಕ್ಷಣಗಳ ಸೇರ್ಪಡೆ
ಜನಮನದೊಳು ಆವರಿಸಿದೆ ಆತಂಕ. 

ಕರೋನ ಪೀಡಿತ ರೋಗಿಗಳ 
ಆಸ್ಪತ್ರೆಗಳ ಅಲೆದಾಟ, 
ಹದಿನಾಲ್ಕು  ದಿನಗಳ ಗೃಹ ದಿಗ್ಭಂದನ
ಮನೆಮಂದಿಯ ಪರೀಕ್ಷೆ ನಿರೀಕ್ಷೆ
ಯಮಯಾತನೆ ನರಕ ಸದೃಶ.

ಕರೋನ  ಪೀಡಿತರ ನಾಲ್ಕು ಗೋಡೆಗಳ
ಒಂಟಿತನ ಅಸ್ಪೃಶ್ಯತೆಯ ಭಾವ ಬಣ್ಣಿಸಲಸದಳ
ಉಳಿದವರಿಗೆ ಒಂದೆಸೂರಿನಡಿ ಮನೆಮಂದಿಗೆ
ಆಸರೆಯಾಗದ ಅಸಹಾಯಕತೆಯ ತಳಮಳ
ಇವೆಲ್ಲದಕೆ ಒಂದೇ ಪರಿಹಾರ.

ಕರೋನ ವಿರುದ್ಧ ಸರಕಾರದ ಸಮರಕೆ ಕೈಜೋಡಿಸೋಣ
ಮಾಸ್ಕ್ ಸಾಮಾಜಿಕಅಂತರ  ಕೈತೊಳೆಯುವಿಕೆ
ಪಾಲಿಸೋಣ
ಆರೋಗ್ಯವ ಕಾಪಾಡಿಕೊಳ್ಳಲು ಪಣತೊಡೋಣ 

ಮನುಜಮತ ವಿಶ್ವಪಥದ ಏಳ್ಗೆಗೆ 
ಹಾರೈಸೋಣ
ಕರೋನ ಮುಕ್ತ ಬದುಕಿಗೆ ದೇವರಲಿ ಪ್ರಾರ್ಥಿಸೋಣ.

Leave a Reply