ಕಪ್ಪೆ-ಆಮೆಗಳ ಸಾಹಸ

ಕಪ್ಪೆ-ಆಮೆಗಳ ಸಾಹಸ
Reading Time: 2 minutes

ಕಪ್ಪೆ-ಆಮೆಗಳ ಸಾಹಸ

  ಆಗ ರಣಗುಡುವ ಬೇಸಿಗೆ ಕಾಲ.ಹೀಗಾಗಿ ಸಂದುಗೊಂದು ಗಳಲ್ಲಿ ವಾಸವಿದ್ದ ಕಪ್ಪೆಗಳಿಗೆ ತುಂಬಾ ಹಿಂಸೆ ಯಾಗುತ್ತಿತ್ತು.ಇದರಿಂದಾಗಿ ಅವು ದಿನ ನಿತ್ಯ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದವು.ಒಂದು ದಿನ ಅವುಗಳ  ಮನವಿ ಆಲಿಸಿದ ಭಗವಂತ ಬಿಟ್ಟೂ ಬಿಡದೆ ಮಳೆ ಸುರಿಸತೊಡಗಿದ.ಜಿಟಿ-ಜಿಟಿ ಮಳೆ ಬೀಳುತ್ತಿದ್ದಂತೆ

ತಮ್ಮ ಗೂಡಿನಿಂದ ಆಚೆ ಬಂದ ಹಿರಿಯ, ಕಿರಿಯ-ಪುಟಾಣಿ ಕಪ್ಪೆಗಳೆಲ್ಲ ಹರ್ಷದಿಂದ “ಹುರ್ರೇ..ಹುರ್ರೇ…”ಎಂದು ಕುಣಿಯತೊಡಗಿದವು.ಆಗ ಮುಸ್ಸಂಜೆ ಸಮಯ ಆಗಿತ್ತು.ಹುಳು-ಹಪ್ಪಡಿಗಳ ಹಾರಾಟ ಹೆಚ್ಚಾಗಿರುವುದ ಕಂಡ ಎಲ್ಲ ಕಪ್ಪೆಗಳೂ ಸಂತಸಪಡುತ್ತ ಬಿಡುವಿಲ್ಲದೇ ತಮ್ಮ ಇಷ್ಟುದ್ದದ ನಾಲಿಗೆ ಚಾಚಿ”ಲಬಕ್-ಲಬಕ್” ಎಂದು  ಹುಳುಗಳನ್ನು ತಿನ್ನಲಾರಂಭಸಿದವು. ಹೀಗೆ ತಮ್ಮ ನಾಲಿಗೆ ಚಪಲ ತೀರಿಸಿಕೊಳ್ಳುತ್ತ ಎಲ್ಲವೂ ಬೀದಿಯ ಒಂದು ಬದಿ ಬಂದು ನಿಂತವು.ಆಗ ಕಪ್ಪೆಯ ಗುಂಪಿನಲ್ಲಿದ್ದ ಹಿರಿಯ ಕಪ್ಪೆ, ರಸ್ತೆಯ ಇನ್ನೊಂದು ಬದಿಯ ಸಣ್ಣ ಹೊಂಡದಲ್ಲಿಯಾವುದೋ ಪ್ರಾಣಿ ನರಳುತ್ತಿರುವುದನ್ನು ಕೇಳಿಸಿಕೊಂಡಿತು.ತಕ್ಷಣವೇ ಅದು ತನ್ನ ಜೊತೆಗೆ ಬರುತ್ತಿದ್ದ ಉಳಿಕೆ ಕಪ್ಪೆಗಳಿಗೆ-“ಏ…ನೋಡ್ರೋ..ಅಲ್ಲೀ..ಪಾಪ ಯಾವ್ದೋ

ಪ್ರಾಣಿ ಹೊಂಡದಲ್ಲಿ ಬಿದ್ದು ಹಿಂಸೆ ಪಡ್ತಾ ಇದೆ… ಬನ್ನಿ ಬೇಗ ಹೋಗಿ ಅದನ್ನ ಉಳಿಸೋಣ”ಎಂದು ಹೇಳಿತು.ಯಜಮಾನನ ಆದೇಶ ಬಂದಿದ್ದೇ ತಡ, ಇಡೀ ಕಪ್ಪೆಗಳ ಸಮೂಹ”ವಟರ್-ವಟರ್” ಎನ್ನುತ್ತ ಆ ಪ್ರಾಣಿ ಬಿದ್ದಿದ್ದ ಹೊಂಡದ ಬಳಿ

ಬಂದವು.ಅಲ್ಲಿ ಬಂದು ನೋಡಿದಾಗ ತನ್ನ ಎರಡೂ ಮೊಣಕಾಲಿಗೆ ಎಟು ತಿಂದು ಗಾಯಗೊಂಡ ಪುಟ್ಟ ಮೊಲದ ಮರಿ ಒದ್ದಾಡುತ್ತಿತ್ತು. ಅದರ ಗಾಯದ ಮೇಲೆಲ್ಲ

ಸೊಳ್ಳೆ ಮತ್ತಿತರೆ ಹುಳು ಕಚ್ಚಿ ಇನ್ನಷ್ಟು ಹಿಂಸೆ ನೀಡುತ್ತಿದ್ದವು.ಅದನ್ನು ಕಂಡ ಹಿರಿಯ ಕಪ್ಪೆ, ತನ್ನ ಎಲ್ಲ ಬಳಗಕ್ಕೆ ಆ ಹೊಂಡದ ಸುತ್ತಲೂ ನಿಂತು ಆ ಮರಿಗೆ ಹಿಂಸೆ ಮಾಡುತ್ತಿದ್ದ ಸೊಳ್ಳೆ ಮತ್ತಿತರೆ ಹುಳು ಗಳನ್ನು ಅಲ್ಲಿಂದ ಓಡಿಸುಂತೆ ಆದೇಶಿಸಿತು.

ಅಷ್ಟು ಹೇಳಿದ್ದೇ ತಡ,ಅವು ತಾವು  ಕುಳಿತಲ್ಲಿಂದಲೇ ತಮ್ಮ ಉದ್ದದ ನಾಲಿಗೆ ಬಳಸಿ

ಕೆಲವೇ ನಿಮಿಷಗಳಲ್ಲಿ ಅಲ್ಲಿ ಮುಕುರಿದ್ದ ಸೊಳ್ಳೆ-ಹುಳುಗಳನ್ನು ಇಲ್ಲದಂತಾಗಿ ಮಾಡಿದವು.ಇದರಿಂದ ಬಿಡುಗಡೆ ಹೊಂದಿ, ಸುಧಾರಿಸಿಕೊಂಡ ಆ ಮರಿ ಪಿಳಿ ಪಿಳಿ

ಕಣ್ಣು ಬಿಡುತ್ತ”ಅಮ್ಮಾ…ಅಮ್ಮಾ….”ಎಂದು ಅಳಲಾರಂಭಿಸಿತು.ಆಗ ಹಿರಿಯ ಕಪ್ಪೆ ಮತ್ತಷ್ಟು ಮರುಗಿ ಹೇಗಾದರೂ ಸರಿ ಹೊಂಡದಿಂದ ಅದನ್ನು ಮೇಲೆತ್ತಿ,ಅದರ ತಾಯಿಯ ಬಳಿ ಸೇರಿಸಬೇಕು-ಎಂದುಕೊಂಡಿತು.ಆದರೆ ಅದರ ಬೆನ್ನಲ್ಲೇ ಅಷ್ಟು ಶಕ್ತಿ ನಮಗೆಲ್ಲಿದೆ? ಎಂದು ಯೋಚಿಸುತ್ತಿದ್ದಾಗ ಅದರ ಕಣ್ಣಿಗೆ ಅನಿತ ದೂರದಲ್ಲಿ ಎರಡು ಆಮೆ ಹೋಗುತ್ತಿರುವುದು ಕಂಡಿತು.ಆಗ ಅದು ತನ್ನ ಪಕ್ಕದಲ್ಲಿ ಕುಳಿತಿದ್ದ ಕಪ್ಪೆಗೆ”ಏ..ತಮ್ಮಾ.. ಅಲ್ಲಿಗೆ ಹೋಗಿ ಅವುಗಳಿಗೆ ವಿಷಯ ತಿಳಿಸಿ ಕರೆದು ತಾ..”ಎಂದು ಹೇಳಿತು.”ಆಗಲಿ”ಎನ್ನುತ್ತ ಕುಪ್ಪಳಿಸುತ್ತ ಹೋದ ಆ ಕಪ್ಪೆ ಆಮೆಗೆ ಎಲ್ಲ

ವಿಷಯ ತಿಳಿಸಿ,ಮರಿ ಮೊಲವನ್ನು ಅದರ ತಾಯಿಯ ಬಳಿ ಸೇರಿಸಲು ಸಹಾಯ

ಮಾಡು-ಎಂದು ವಿನಂತಿಸಿಕೊಂಡಿತು.ಕಪ್ಪೆಯ ಮಾತು ಆಲಿಸಿದ ಆಮೆಗಳು”ಅಯ್ಯೋ…ಪಾಪ ..ಮೊದಲು ಆ ಕೆಲಸ ಮಾಡೋಣ ಬಾ…”ಎಂದು ಅದರೊಂದಿಗೆ ಹೊರಟು ಹೊಂಡದ ಬಳಿ ಬಂದವು.ಹೊಂಡದ ಸುತ್ತ ಯಾವುದೇ ಹುಳು ಬರದಂತೆ ತಡೆಯಲು ನಿಂತ ಕಪ್ಪೆಗಳು ಆಮೆಗಳನ್ನು ಕಂಡಾಗ “ಬನ್ನೀ..ಅಣ್ಣಾ..ಬನ್ನೀ”ಎನ್ನುತ್ತ ಸ್ವಾಗತಿಸಿದವು.ಆಮೆಗಳು ಒಂದು ಬಾರಿ ಆ ಹೊಂಡದೊಳಗೆ ಇಣುಕಿ ನೋಡಿ ತಮ್ಮ ತಮ್ಮೊಳಗೆ ಏನೋ ಮಾತನಾಡಿಕೊಡವು.

          ತದನಂತರ ಅವುಗಳ ಪೈಕಿ ಒಂದು ಆಮೆ ಹೊಂಡದ ಅಂಚಿಗೆ ತಾಗಿಕೊಂಡು

ನಿಂತಿತು.ಮತ್ತೊಂದು ಆಮೆ ನಿಧಾನವಾಗಿ ಹೊಂಡದಲ್ಲಿ ಇಳಿದು, ತನ್ನ ಬಲ ಬಳಸಿ

ಹಿಂದಿನಿಂದ ಮೋಲದ ಮರಿಯನ್ನು ತಳ್ಳತೊಡಗಿತು.ಅದರ ಕಾರ್ಯ ಹುರಿದುಂಬಿಸುವ ತರಹ ಅಲ್ಲಿದ್ದ ಕಪ್ಪೆಗಳು”ಹಾಂ… ಇನ್ನೂ ಸ್ವಲ್ಪ.. ಇನ್ನೂ ಸ್ವಲ್ಪ”ಎಂದು ಕೂಗುತ್ತ ಕುಣಿಯತೊಡಗಿದವು.ಅಂತೂ ಆ ಹೊಂಡದಿಂದ ಮೊಲದ ಮರಿ ಆಚೆಗೆ ತಂದ ಆಮೆ, ಅಲ್ಲಿ ನಿಂತಿದ್ದ ಇನ್ನೊಂದು ಆಮೆಯ ಬೆನ್ನಿನ ಮೇಲೆ ಕೂರಿಸಲು ಸಫಲ ವಾಯಿತು.ಇಷ್ಟೇ ಸಾಕು ಸುತ್ತಲೂ ನೆರೆದ ಕಪ್ಪೆಗಳು ಆಮೆಗೆ

ಒಕ್ಕೊರಲಿನಿಂದ ಜೈ ಕಾರ ಹಾಕಿದವು.ಆನಂತರ ಎಲ್ಲವೂ ಸೇರಿ ಮೊಲದ ಮರಿಮ ಅಮ್ಮನನ್ನು ಹುಡುಕಲು ಮುಂದಾದಾಗ, ಪಕ್ಕದ ಗಿಡಗಂಟಿಗಳ ಒಳಗಿನಿಂದ ಸೋತ ಧ್ವನಿಯಲ್ಲಿ ಅದರ ತಾಯಿ”ಕಂದಾ…ಕಂದಾ….”ಎಂದು ತನ್ನ ಮರಿ ಹುಡುಕುತ್ತ  ಬಂದ ಮೊಲ ಕಂಡು ಆಮೆ-ಕಪ್ಪೆಗಳ ಸಮೂಹಕ್ಕೆ ಹಿಡಿಸಲಾರದಷ್ಟು ಖುಷಿ ಆಯಿತು.ಹಿರಿಯ ಕಪ್ಪೆ ಆ ಮೊಲವನ್ನು ಕೂಗಿ,ಆಮೆಯ ಬೆನ್ನಿನ ಮೇಲಿದ್ದ ಅದರ ಮರಿಯನ್ನು ಅದಕ್ಕೆ ಒಪ್ಪಿಸಿತು.ಕಳೆದು ಹೋದ ತನ್ನ ಮರಿ ಯನ್ನು ದೊರಕಿಸಿಕೊಟ್ಟಿದ್ದಕ್ಕೆ ಅದು ತನ್ನೆರಡು ಮುಂಗಾಲು ಎತ್ತಿ  ಕಪ್ಪೆ-ಆಮೆಗಳ ಸಾಹಸಕ್ಕೆ ಧನ್ಯವಾದಗಳನ್ನು ತಿಳಿಸಿ ಮರಿಯೊಂದಿಗೆ ಹೊರಟು ಹೋಯಿತು.

Leave a Reply