
Reading Time: < 1 minute
ಬನ್ವಿ ಬನ್ನಿ ಗೆಳೆಯರೆ ಎಳೆಯರೆ
ವಿಶ್ವ ಪರಿಸರ ದಿನವ ಆಚರಿಸೋಣ
ರಮ್ಯ ಪ್ರಕೃತಿ ಜನುಮದಾತೆ ವನದೇವಿಗೆ ನಮಿಸೋಣ
ಪ್ರಕೃತಿಪ್ರೇಮಿ ಸಾಲುಮರದ ತಿಮ್ಮಕ್ಕನ್ನ ಅನುಸರಿಸೋಣ
ಮನೆಗೊಂದು ಸಸಿಯ ನೆಟ್ಟು ಮರವ ಬೆಳೆಸೋಣ
ಜೀವಿಗಳ ಶುದ್ಧಗಾಳಿಯ ಮೂಲ ಮರವ ರಕ್ಷಿಸೋಣ
ಭೂಸವಕಳಿ ಪ್ರವಾಹ ತಡೆಗೋಡೆ ಮರವ ಉಳಿಸೋಣ
ಸ್ವಾರ್ಥಕ್ಕಾಗಿ ಮರಗಳ ನಾಶಗೈಯದೆ ಕಾಡ ಬೆಳೆಸೋಣ
ಹೇ ಮನುಜ, ಪರಿಸರ ಸಂರಕ್ಷಣೆ ಪಣವ ತೊಡೋಣ
ಕಸಮುಕ್ತ ಸ್ವಚ್ಛಭಾರತ ಅಭಿಯಾನಕೆ ಕೈಜೋಡಿಸೋಣ
ಪ್ಲಾಸ್ಟಿಕ್ ಮುಕ್ತ ರಾಷ್ಟ್ರದೆಡೆಗೆ ಹೆಜ್ಜೆ ಹಾಕೋಣ
ಜೀವಜಲ ವಿಷಜಲವಾಗದಂತೆ ಜಾಗೃತೆ ವಹಿಸೋಣ
ಹೃದಯಾಂತರಾಳದೆ ಪರಿಸರ ಸಂರಕ್ಷಣೆಗೆ ಶ್ರಮಿಸೋಣ
ಹಸಿರೆ ಜೀವನದ ಉಸಿರು ಎಂಬ ಅರಿವ ಮೂಡಿಸೋಣ.
ಕಲ್ಪನ ಹೊಸಪೇಟೆ
Author: Kalpana Hosapete kalpanahosapete1963 at gmail.com>